ज्योतिषीय फायदे

arrow

ज्योतिषीय फायदे

ज्योतिषीय फायदे

ದೀಪ ಹಚ್ಚಿಟ್ಟರೆ ಅಹಂಕಾರ ಕರಗುತ್ತಂತೆ.! ದೀಪ ಹಚ್ಚುವುದು ಹೇಗೆ.?

ನಾವು ದೀಪಗಳನ್ನು ಬೆಳಗುವುದಕ್ಕೆ ಸಾಕಷ್ಟು ಸಂಪ್ರದಾಯಗಳು ಸಾಥ್‌ ನೀಡುತ್ತದೆ. ದೀಪಾವಳಿ ಹಬ್ಬದ ದಿನದಂದು ಮಾತ್ರವಲ್ಲ, ಪ್ರತಿಯೊಂದು ದಿನವೂ ನಾವು ಮನೆಯಲ್ಲಿ ದೇವರಿಗೆ ದೀಪವನ್ನು ಬೆಳಗುತ್ತೇವೆ. ದೀಪಗಳ ಬೆಳಕು ಆಕಾಶ, ಭೂಮಿ ಎರಡನ್ನೂ ಪ್ರಕಾಶಮಾನವಾಗಿ ಮಾಡುತ್ತದೆ. ದೀಪವನ್ನು ಬೆಳಗಿಸುವ ಮೂಲಕ ಮನೆಯನ್ನು ಬೆಳಗಿಸುವುದು ಮಾತ್ರವಲ್ಲ, ಬೆಳಕಿನಿಂದ ಕತ್ತಲೆಯನ್ನು ಕೂಡ ದೂರ ಮಾಡಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪವನ್ನು ಬಳಗಿಸುವುದು ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ದೀಪವು ಕೇವಲ ಬೆಳಕಿನ ಸಾಧನವಲ್ಲ, ಆದರೆ ನಮ್ಮ ಪ್ರಾರ್ಥನೆಗಳನ್ನು ದೇವರಿಗೆ ತಿಳಿಸುವ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ. ದೀಪಗಳನ್ನು ಬೆಳಗಿಸುವುದರ ಮಹತ್ವವೇನು ಮತ್ತು ಶಾಸ್ತ್ರದಲ್ಲಿ ದೀಪವನ್ನು ಬೆಳಗುವುದರ ಪ್ರಯೋಜನವೇನು ನೋಡಿ.